Anjal Fish Fry | ಅಂಜಲ್ ಮೀನ್ ಫ್ರೈ
ಬೇಕಾಗುವ ಸಾಮಗ್ರಿಗಳು :
- ಅರ್ಧ ಕೆಜಿ ಅಂಜಲ್ ಮೀನು
- ಖಾರದ ಪುಡಿ ಒಂದೂವರೆ ಚಮಚ
- ಅರ್ಧ ಚಮಚ ಅರಿಶಿಣ ಪುಡಿ
- 1/4 ಚಮಚ ಜೀರಿಗೆ ಪುಡಿ
- ದೊಡ್ಡ ನಿಂಬೆಹಣ್ಣು ಗಾತ್ರದಷ್ಟು ಹುಣಸೆ ಹಣ್ಣು
- 1 ಚಮಚ ಉಪ್ಪು
- ಎಣ್ಣೆ 2 ಚಮಚ
ತಯಾರಿಸುವ ವಿಧಾನ :
* ಅಂಜಲ್ ಮೀನಿಗೆ ಅರಿಸಿಣ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ತೊಳೆಯಿರಿ.
* ಹುಣಸೆಹಣ್ಣನ್ನು 1/4 ಕಪ್ ನೀರಿನಲ್ಲಿ ಹಾಕಿ ಹುಣಸೆ ಹಣ್ಣಿನ ರಸ ಮಾಡಿ.
* ಅದನ್ನು ತಟ್ಟೆಗೆ ಹಾಕಿ ಆ ರಸಕ್ಕೆ ಅರಿಶಿಣ,1/4 ಚಮಚ ಜೀರಿಗೆ ಪುಡಿ, ಉಪ್ಪು, ಖಾರದ ಪುಡಿ ಹಾಕಿ ಮಿಶ್ರ ಮಾಡಿ ಅದಕ್ಕೆ ಮೀನನ್ನು ಹಾಕಿ ಆ ಪೇಸ್ಟ್ ಅನ್ನು ಮೀನಿನ ತುಂಡುಗಳ ಮೇಲೆ ಚೆನ್ನಾಗಿ ಲೇಪಿಸಿ .
* ಈಗ ಮೀನು ಮಸಾಲೆಯನ್ನು ಚೆನ್ನಾಗಿ ಹೀರಿ ಕೊಳ್ಳಲು ಎರಡು ತಾಸು ಫ್ರಿಡ್ಜ್‌ನಲ್ಲಿಡಿ.
* ತವಾ ಬಿಸಿ ಮಾಡಿ ಅದಕ್ಕೆ 2 ಚಮಚ ಎಣ್ಣೆ ಹಾಕಿ ಮೀನು ಹಾಕಿ 10 ನಿಮಿಷ ಫ್ರೈ ಮಾಡಿ ನಂತರ ಅದರ ಮತ್ತೊಂದು ಬದಿಯನ್ನು ಕೂಡ 10 ನಿಮಿಷ ಫ್ರೈ ಮಾಡಿದರೆ ಅಂಜಲ್ ಮೀನಿನ ತವಾ ಫ್ರೈ ಸವಿಯಲು ಸಿದ್ದ
Tags
ಅಂಜಲ್ ಮೀನಿನ ಫ್ರೈ