ಚಿಕನ್ ಗ್ರೇವಿ | Chicken gravy

 

ಚಿಕನ್ ಗ್ರೇವಿ | Chicken gravy

Recipe Credit: Ammu

Chicken Gravy

 ಬೇಕಾಗುವ ಪದಾರ್ಥಗಳು

  • ಚಿಕನ್ - ಅರ್ಧ ಕೆಜಿ
  • ಒಣಗಿದ ಮೆಣಸಿನಕಾಯಿ - 8-10
  • ಈರುಳ್ಳಿ - 2
  • ಕೊತ್ತಂಬರಿ ಸೊಪ್ಪು
  • ಅರಿಸಿನ- ಸ್ವಲ್ಪ
  • ಎಣ್ಣೆ – ಸ್ವಲ್ಪ
  • ಟೊಮೆಟೊ – 2
  • ಗೋಡಂಬಿ 
  • ಉಪ್ಪು – ರುಚಿಗೆ ತಕ್ಕಷ್ಟು
  • ಅಚ್ಚ ಖಾರದ ಪುಡಿ- 1 ಚಮಚ
  • ದನಿಯಾ ಪುಡಿ – 1 ಚಮಚ
  • ಗರಂಮಸಾಲ – 1 ಚಮಚ
  • ಕಸೂರಿ ಮೇಥಿ – 1 ಚಮಚ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ

ಮಾಡುವ ವಿಧಾನ :

  • ಮೊದಲು ಒಣಮೆಣಸಿನ ಕಾಯಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ನಂತರ ನೆನೆದ ಒಣಮೆಣಸಿನಕಾಯಿ, ಟೊಮೆಟೊ ಮತ್ತು ಗೋಡಂಬಿಯನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
  • ಬಾಣಲೆಯನ್ನು ಒಲೆಯ ಮೇಲಿಟ್ಟು ಬಿಸಿಯಾದ ಬಳಿಕ 2 ಚಮಚ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪಗೆ ಹುರಿದುಕೊಳ್ಳಿ. ಬಳಿಕ ಇದಕ್ಕೆ ಶುಂಠಿಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ತೊಳೆದಿಟ್ಟ ಚಿಕನ್ ಸೇರಿಸಿ ಅದಕ್ಕೆ ಅರಿಸಿನ, ಉಪ್ಪು,  ದನಿಯಾ ಪುಡಿ, ಅಚ್ಚ ಖಾರದ ಪುಡಿ ಹಾಕಿ. ಚಿಕನ್ ಅರ್ಧ ಬೇಯುವವರೆಗೆ  ಎಣ್ಣೆಯಲ್ಲಿ ಫ್ರೈ ಮಾಡಿ.
  • ಈಗ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೆ  ಬೇಯಿಸಿ. ಕೊನೆಯಲ್ಲಿ ಕಸೂರಿ ಮೇಥಿ, ಗರಂಮಸಾಲೆ,  ಕೊತ್ತಂಬರಿ ಸೊಪ್ಪು ಹಾಗೂ ಅರ್ಧ ಲೋಟ ನೀರು ಸೇರಿಸಿ. 4 ನಿಮಿಷ ಕುದಿಸಿಕೊಂಡರೆ ರುಚಿಕರವಾದ ರೆಸ್ಟೋರೆಂಟ್ ಸ್ಟೈಲ್ ಚಿಕನ್ ಗ್ರೇವಿ ಸವಿಯಲು ಸಿದ್ಧ.

Post a Comment

Previous Post Next Post