ಬೊಂಡಾಸ್ ಸುಕ್ಕ
ಮಾಡಲು ಬೇಕಾಗುವ ಸಾಮಾಗ್ರಿಗಳು :
- ಬೊಂಡಾಸ್ ಮೀನು - ಅರ್ಧ ಕೆಜಿ
- ತುರಿದ ತೆಂಗಿನಕಾಯಿ - ಒಂದು ಕಪ್
- ಬಫತ್ ಪೌಡರ್ - ಒಂದೂವರೆ ಟೀ ಸ್ಪೂನ್
- ಟೊಮೇಟೊ -ಎರೆಡು
- ಈರುಳ್ಳಿ -ಒಂದು
- ಹಸಿಮೆಣಸಿನಕಾಯಿ -ಎರೆಡು
- ಶುಂಠಿ - ಒಂದು ಇಂಚು
- ಬೆಳ್ಳುಳ್ಳಿ - ನಾಲ್ಕು ಎಸಳು
- ಎಣ್ಣೆ - ನಾಲ್ಕು ಟಿ ಸ್ಪೂನ್
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಕರಿಬೇವಿನ ಸೊಪ್ಪು - ಐದು ಎಸಳು
- ನೀರು - ಒಂದು ಕಪ್
ಮಾಡುವ ವಿಧಾನ :
- ಮೊದಲು ಬೊಂಡಾಸ್ ಮೀನನ್ನು ಶುಚಿಯಾದ ನೀರಿನಲ್ಲಿ ಚನ್ನಾಗಿ ತೊಳೆದುಕೊಳ್ಳಬೇಕು.
- ತೊಳೆದು ಕೊಂಡ ಬೊಂಡಾಸ್ ಮೀನನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಕೊಳ್ಳಿ , ನೀರನ್ನು ಶೋಧಿಸಿಕೊಂಡು ಬಡಬದಿಯಲ್ಲಿ ಇರಿಸಿ .
- ಒಂದು ಪ್ಯಾನ್ ಅನ್ನು ಹೀಟ್ ಮಾಡಿಕೊಂಡು ಅದಕ್ಕೆ ಎಣ್ಣೆ ಯನ್ನು ಹಾಕಿ , ಎಣ್ಣೆ ಬಿಸಿಯಾದ ನಂತರ ಕರಿಬೇವು,ಈರುಳ್ಳಿ ಸೇರಿಸಿ ಚನ್ನಾಗಿ ಬಾಡಿಸಿ .
- ಈರುಳ್ಳಿ ಸ್ವಲ್ಪ ಬಣ್ಣ ಬದಲಾಯಿಸಿದ ನಂತರ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಹಾಗು ಕತ್ತರಿಸಿದ ಹಸಿಮೆಣಸಿನಕಾಯಿಯನ್ನು ಸೇರಿಸಿ ಫ್ರೈ ಮಾಡಿ.
- ಈಗ ಟೊಮ್ಯಾಟೊವನ್ನು ಸೇರಿಸಿ ಚನ್ನಾಗಿ ಬಾಡಿಸಿಕೊಳ್ಳಿ.
- ಟೊಮೇಟೊ ಬಾಡಿದನಂತರ ಬಫತ್ ಪೌಡರ್ ಅನ್ನು ಸೇರಿಸಿ ಎರಡು ನಿಮಿಷಗಳ ಕಾಲ ಬೇಯಿಸಿ .
- ಈಗ ಬೊಂಡಾಸ್ ಅನ್ನು ಮಸಾಲೆಗೆ ಸೇರಿಸಿ ಉಪ್ಪು ಹಾಗು ಒಂದು ಕಪ್ ನೀರು ಹಾಕಿ ಬೇಯಲು ಬಿಡಿ .
- ಹದಿನೈದು ನಿಮಿಷಗಳ ಕಾಲ ಬೇಯಿಸಿದ ನಂತರ ಅದಕ್ಕೆ ತೆಂಗಿನಕಾಯಿ ತುರಿ ಯನ್ನು ಸೇರಿಸಿ.
- ನೀರಿನ ಅಂಶ ಕಡಿಮೆ ಆದ ಮೇಲೆ ಸ್ಟವ್ ಅನ್ನು ಆಫ್ ಮಾಡಿ ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ಬೊಂಡಾಸ್ ಸುಕ್ಕ ಸವಿಯಲು ಸಿದ್ದ.
Tags
ಬೊಂಡಾಸ್ ಸುಕ್ಕ