ಎಣ್ಣೆಗಾಯಿ ರೆಸಿಪಿ || Yennegayi Recipe || ಮಲ್ನಾಡ್ Style

 ಎಣ್ಣೆಗಾಯಿ ರೆಸಿಪಿ ಮಲೆನಾಡ ಸ್ಟೈಲ್ 



ಅಗತ್ಯವಿರುವ  ಪದಾರ್ಥಗಳು :
  • ನಾಲ್ಕು  ಬದನೆಕಾಯಿ
  • ಐದು  ಒಣಮೆಣಸು
  • ಒಂದು  ಟೊಮಾಟೊ
  • ಒಂದು  ಈರುಳ್ಳಿ
  • ಒಂದು ವರೆ ಟೀಸ್ಪೊನ್ ಜೀರಿಗೆ
  • ಐವತ್ತು  ಗ್ರಾಂ ಕಡಲೆ ಬೀಜ
  • ಸ್ವಲ್ಪ ಹಿಂಗು
  • ಒಂದು  ಟೀಸ್ಪೊನ್ ದನಿಯ ಪುಡಿ
  • ಒಂದು  ಟೀಸ್ಪೊನ್ ಜೀರಿಗೆ ಪುಡಿ
  • ಅರ್ಧ ಟೀಸ್ಪೊನ್ ಗರಂ ಮಸಾಲ ಪುಡಿ
  • ಸ್ವಲ್ಪ ಬೆಲ್ಲ
  • ಅರ್ಧ ಟೀಸ್ಪೊನ್ ಅರಿಶಿಣ ಪುಡಿ
  • ಕರಿಬೇವು
  • ಎಣ್ಣೆ
  • ಉಪ್ಪು
  • ಎರಡು ಮೂರು ಚಕ್ಕೆ,ಲವಂಗ
  • ಕೊತ್ತಂಬರಿ ಸೊಪ್ಪು(ಅಲಂಕಾರಕ್ಕೆ)


ಮಾಡುವ ವಿಧಾನ :

ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಡಲೆ ಬೀಜವನ್ನು ಚೆನ್ನಾಗಿ ಕರಿಯಿರಿ ಅದೆ ಎಣ್ಣೆಗೆ ನಾಲ್ಕು ಭಾಗ ಮಾಡಿದ ಬದನೆಕಾಯಿಯನ್ನು ಅರ್ಧ ಬೇಯುವವರೆಗೆ ಕರಿಯಿರಿ. ಮಿಕ್ಸಿ ಜಾರಿಗೆ ಕರಿದ ಕಡಲೆ ಬೀಜ, ಒಣ ಮೆಣಸು, ಸ್ವಲ್ಪ ಉಪ್ಪು ಹಾಕಿ ಪುಡಿ ಮಾಡಿಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಚಕ್ಕೆ,ಲವಂಗ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ ನಂತರ ಹಿಂಗು, ಹೆಚ್ಚಿದ ಟೊಮಾಟೊ ಹಾಕಿ 2 ನಿಮಿಷ ಬೇಯಿಸಿ ಅದಕ್ಕೆ ದನಿಯ ಪುಡಿ, ಜೀರಿಗೆ ಪುಡಿ ,ಗರಂ ಮಸಾಲಪುಡಿ ,ಅರಿಶಿಣ ಪುಡಿ, ಕರಿಬೇವು , ಕಡಲೆ ಬೀಜದ ಪುಡಿ ಹಾಕಿ ಮಿಶ್ರಣ ಮಾಡಿ ಬೆಲ್ಲ ,ಉಪ್ಪು ಹಾಕಿ ಕಲಸಿ ಅದಕ್ಕೆ ಕರಿದ ಬದನೆಕಾಯಿ ಹಾಕಿ 5 -10 ನಿಮಿಷ ಬೇಯಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಉಣಬಡಿಸಿ.

Post a Comment

Previous Post Next Post