Palak Paneer | ಪಾಲಕ್ ಪನೀರ್

 

ಪಾಲಕ್ ಪನೀರ್

Palak Paneer


ಮಾಡಲು ಬೇಕಾಗುವ ಸಾಮಗ್ರಿಗಳು: 

  • ಟೊಮೆಟೊ-21g
  • ಶುಂಠಿ ಬೆಳ್ಳುಳ್ಳಿ ಪೇಸ್ಟ್-40g
  • ಪನೀರ್ -369 g
  •  ಪಾಲಕ್-275g
  •  ಕೊತ್ತಂಬರಿ ಸೊಪ್ಪು -51g
  • ಕಾಯಿ ಮೆಣಸು-59g
  • ನೀರುಳ್ಳಿ 2-4
  • ಜೀರಿಗೆ -4g
  • ಜೀರಿಗೆ ಪುಡಿ-2g
  • ಕೊತ್ತಂಬರಿ ಪೌಡರ್-4g
  •  ಗರಮ್ಮಾಸಲ ಹುಡಿ -3g
  •  ಕಸೂರಿ ಮೆಂತೆ ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು
  • ತುಪ್ಪ-61g.


ಮಾಡುವ ವಿಧಾನ :

  1. ಮೊದಲು ಪಾಲಕ್ ಸೊಪ್ಪನ್ನು ತೊಳೆದು  ಬಾಣಲೆಯಲ್ಲಿ ಬೇಯಿಸಿ, ಅತಿಯಾಗಿ ಬೆಯಿಸಬೇಡಿ ಪಾಲಕ್ ವಿಟಮಿನ್ ಗಳು ಕಳೆದುಕೊಳ್ಳಬಹುದು.ಬೇಯಿಸಿ ತಣ್ಣಗಾದ ಸೊಪ್ಪನ್ನು ಬದಿಗಿಡಿ .
  2. ನಂತರ ಮಿಕ್ಸಿಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೊ ಹಾಕಿ, ಹಾಗೇ ಮೊದಲು ಬೇಯಿಸಿ ಇಟ್ಟಿದ ಪಾಲಕ್ ಸೊಪ್ಪನ್ನು ಕೊಡ ಹಾಕಿ, ಸ್ವಲ್ಪ ನೀರು ಸೇರಿಸಿ ಮಿಕ್ಸ್ ಒನ್ ಮಾಡಿ. ಹಸಿರು ಬಣ್ಣದ ಸಾಂಬಾರ್ ರೀತಿಯ ಪಾಲಕ್ ಸೂಪ್ ರೆಡಿಯಾಯಿತು. ಇದನ್ನು ಬದಿಗಿಡಿ.
  3. ನಂತರ ಬಾಣಲೆ ತೆಗೆದುಕೊಂಡು ಮೇಲಿಡಿ ಅದಕ್ಕೆ ತುಪ್ಪ ಹಾಕಿ, ತುಪ್ಪ ಕರಗಿದ ನಂತರ ಜೀರಿಗೆ ಹಾಕಿ (Cumin), ನಂತರ ಚಿಕ್ಕದಾಗಿ ಕತ್ತರಿಸಿ ಇಟ್ಟ ಈರುಳ್ಳಿಯನ್ನು ಬಾಣಲೆಗೆ ಹಾಕಿ, ಒಂದು ಸ್ಪೂನ್ ಉಪ್ಪನ್ನು ಹಾಕಿ, ಹಾಗೇ ಕಂದು ಬಣ್ಣ ಬಂದ ನಂತರ ಶುಂಠಿ ಪೇಸ್ಟ್ ಹಾಕಿ ಕಲಕಿ. ನಂತರ ಮಸಾಲೆ ಹುಡಿ ಹಾಗೂ ಕೊತ್ತಂಬರಿ ಹುಡಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿ.
  4. ನಂತರ ಹಿಂದೆ ನಾವು ಮಾಡಿ ಇಟ್ಟಿದ್ದ ಪಾಲಕ್ ಸೊಪ್ಪಿನ ಕಷಾಯವನ್ನು ಸ್ಟವ್ ನಲ್ಲಿರುವ ಬಾಣಲೆಗೆ ಹಾಕಿ ಸರಿಯಾಗಿ ಕಲಸಿ . ಪಾಲಕ್ ಮಿಶ್ರಣವು ದಪ್ಪ ಇದ್ದಲ್ಲಿ ಸ್ವಲ್ಪ ನೀರು ಸೇರಿಸಿ ಹದ ಮಾಡಿ. ನಂತರ ಬಾಣಲೆಗೆ ಪನೀರ್ ಅನ್ನು ಸೇರಿಸಿ. ಹದವಾಗಿ ಬೇಯಿಸಿ. ಐದು ನಿಮಿಷದ ನಂತರ ಸ್ಟವ್ ಆಫ್ ಮಾಡಿ. ಈಗ  ರುಚಿಯಾದ ಪಾಲಕ್ ಸೊಪ್ಪಿನ ಪನೀರ್ ರೆಡಿ.

Post a Comment

Previous Post Next Post