ಮೊಟ್ಟೆ ಕರಿ ॥ EGG Curry
ಬೇಕಾಗುವ ಪದಾರ್ಥಗಳು :
- 4-5 ಮೊಟ್ಟೆ ಬೇಯಿಸಿದ್ದು
- 4-5 ಒಣಮೆಣಸು
- 3- 4 ಟೀಸ್ಪೊನ್ ಧನಿಯ
- 2- 3 ಟೀಸ್ಪೊನ್ ಜೀರಿಗೆ
- 2- 3 ಟೀಸ್ಪೊನ್ ಕಾಳು ಮೆಣಸು
- 2 ಚಕ್ಕೆ-ಲವಂಗ
- ½ ಟೀಸ್ಪೊನ್ ಮೆಂತ್ಯ
- 1 ಕಪ್ ಕಾಯಿ ತುರಿ
- 4 ಬೆಳ್ಳುಳ್ಳಿ
- ಸಣ್ಣದಾಗಿ ಹೆಚ್ಚಿದ ಶುಂಠಿ (1 ಇಂಚು)
- ಉಪ್ಪು
- ಹುಣಸೆ ರಸ ರುಚಿಗೆ ಅನುಸಾರ
- ½ ಟೀಸ್ಪೊನ್ ಅರಿಶಿಣ ಪುಡಿ
- 1 ಈರುಳ್ಳಿ (ಸಣ್ಣಗೆ ಕತ್ತರಿಸಿದ)
- ಕೊತ್ತಂಬರಿ ಸೊಪ್ಪು
- ನೀರು
ಮಾಡುವ ವಿಧಾನ :
ಬಾಣಲೆಗೆ ಧನಿಯ, ಜೀರಿಗೆ, ಕಾಳು ಮೆಣಸು, ಚಕ್ಕೆ, ಲವಂಗ ಮೆಂತ್ಯ ಒಣಮೆಣಸು ಹಾಕಿ ರೋಸ್ಟ್ ಮಾಡಿ, ನಂತರ ಅದಕ್ಕೆ ಬೆಳ್ಳುಳ್ಳಿ ,ಕಾಯಿ ತುರಿ, ಹುಣಸೆರಸ, ಅರಿಶಿಣಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ರುಬ್ಬಿದ ಮಸಾಲೆಯನ್ನು ಪಾತ್ರೆಗೆ ಹಾಕಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಸಣ್ಣದಾಗಿ ಹೆಚ್ಚಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿ, ಅದಕ್ಕೆ ಬೇಯಿಸಿದ ಮೊಟ್ಟೆ ಹಾಕಿ 5 ನಿಮಿಷ ಕುದಿಯಲು ಬಿಟ್ಟು ಕೊತ್ತಂಬರಿ ಸೊಪ್ಪು ಉದುರಿಸಿ ಸರ್ವ್ ಮಾಡಿ.
Tags
ಮೊಟ್ಟೆ ಕರಿ