ಸಮೋಸ
ಮಾಡಲು ಬೇಕಾಗುವ ಸಾಮಾಗ್ರಿಗಳು:
* 250 ಗ್ರಾಂ ಮೈದಾ ಹಿಟ್ಟು
* 2 ಕಪ್ ಬೇಯಿಸಿದ ಆಲೂಗಡ್ಡೆಯ ಚೂರುಗಳು
* ಗರಮ್ ಮಸಾಲ
* ಹಸಿರು ಬಟಾಣಿ ಸ್ವಲ್ಪ
* ಮೆಣಸಿನ ಕಾಯಿ ಸ್ವಲ್ಪ
* ಕಡಲೇಕಾಯಿ/ಶೇಂಗಾ ಸ್ವಲ್ಪ
* ಜೀರಿಗೆ ಸ್ವಲ್ಪ
* ಚಾಟ್ ಮಸಾಲ
* ಹುಳಿ ಪುಡಿ/ಮಾವಿನ ಹುಳಿ ಪುಡಿ
* ಜೀರಿಗೆ ಪುಡಿ
* ಉಪ್ಪು
* ಹುರಿಯಲು ಎಣ್ಣೆ
* ಬಿಸಿ ನೀರು
* ಮೆಣಸಿನ ಪುಡಿ/ಖಾರ ಪುಡಿ
* ಅರಿಶಿನ
* ಓಮ್ ಕಾಳು
* ಸಮೋಸಾ ಮಾಡಲು ತುಪ್ಪ
ವಿಧಾನ:
1. ಬೆಚ್ಚಗಿನ ನೀರಿಗೆ ತುಪ್ಪ, ಓಮ್‍ಕಾಳು ಒಂದು ಚಮಚ, ಉಪ್ಪು ಎಲ್ಲವನ್ನು ಸೇರಿಸಿ ಮೃದುವಾಗಿ ಹಿಟ್ಟನ್ನು ಕಲಸಿ, 30 ನಿಮಿಷಗಳ ಕಾಲ ಬಿಡಿ.
2. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಜೀರಿಗೆಯನ್ನು ಹುರಿಯಿರಿ. ನಂತರ ಮೆಣಸಿನ ಕಾಯಿ, ಅರಿಶಿನ, ಜೀರಿಗೆ ಪುಡಿ, ಹುಳಿ ಪುಡಿಯನ್ನು ಸೇರಿಸಿ.
3. ಆಲೂಗಡ್ಡೆ, ಹಸಿರು ಬಟಾಣಿ, ಹಸಿರು ಮೆಣಸಿನ ಕಾಯಿ, ಕಡಲೇ ಬೀಜವನ್ನು ಸೇರಿಸಿ. ಚೆನ್ನಾಗಿ ಮಿಶ್ರಣಗೊಳಿಸಿ. ನಂತರ ಉಪ್ಪು, ಗರಮ್ ಮಸಾಲೆ, ಚಾಟ್ ಮಸಾಲೆಯನ್ನು ಸೇರಿಸಿ ಮಿಶ್ರಣಗೊಳಿಸಿ. ಬಳಿಕ ಉರಿಯಿಂದ ಕೆಳಗಿಳಿಸಿ.
4. ಕಲಸಿಟ್ಟುಕೊಂಡ ಹಿಟ್ಟನ್ನು ಚಿಕ್ಕ ತ್ರಿಕೋನ ಆಕಾರದಲ್ಲಿ ಲಟ್ಟಿಸಿಕೊಂಡು ಆಲೂಗಡ್ಡೆ ಮಿಶ್ರಣವನ್ನು ಸೇರಿಸಿ. ನಂತರ ಬೆರಳುಗಳ ಸಹಾಯದಿಂದ ಮುಚ್ಚಿ.
5. ಹುರಿಯಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿರಿ. ಕಾದ ತಕ್ಷಣ ತ್ರಿà²ುಜಾಕೃತಿಯ ಸಮೋಸವನ್ನು ಎಣ್ಣೆಯಲ್ಲಿ ಬಿಡಿ.
6. ಎಣ್ಣೆಯಲ್ಲಿ ನೊರೆಯಗುಳ್ಳೆಗಳು ಕಡಿಮೆಯಾದಂತೆ ಕಂದು ಬಣ್ಣಕ್ಕೆ ತಿರುಗುತ್ತವೆ.
7. ಆಗ ಎಣ್ಣೆಯಿಂದ ತೆಗೆದು ಕಾಗದದ ಮೇಲೆ ಹಾಕಿ.
8. ಈಗ ಬಿಸಿ ಬಿಸಿ ಇರುವಾಗಲೇ ಪುದೀನಾ ಚಟ್ನಿ ಅಥವಾ ಟೊಮೆಟೊ ಕೆಚಪ್‍ನೊಂದಿಗೆ ಸವಿಯಲು ನೀಡಿ.