Mutton Curry | ಮಟನ್ ಸಾರು
ಬೇಕಾಗುವ ಸಾಮಾಗ್ರಿ :
- ಮಟನ್ 1/2 ಕೆಜಿ
- ಈರುಳ್ಳಿ -1
- ಬೆಳ್ಳುಳ್ಳಿ -15 ಎಸಳು
- ಕೊತ್ತಂಬರಿಸೊಪ್ಪು ಸ್ವಲ್ಪ
- ಅರಿಶಿನ ಪುಡಿ
- ಕಾಳು ಮೆಣಸು -1/2 ಚಮಚ
- ತೆಂಗಿನ ತುರಿ -1/2 ಕಪ್
- ಚಕ್ಕೆ -1″
- ಲವಂಗ -3
- ಶುಂಠಿ -1″
- ಟೊಮೆಟೊ -1
- ಉರುಗಡ್ಲೆ -1 ಚಮಚ
- ಧನಿಯ ಪುಡಿ -2 ಚಮಚ
- ಒಣಮೆಣಸಿನ ಕಾಯಿ ಪುಡಿ -2 ಚಮಚ (ಖಾರಕ್ಕೆ ಬೇಕಾಗುವಷ್ಟು)
ಮಾಡುವ ವಿಧಾನ:
ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಅರಿಶಿನ ಮತ್ತು ಕಾಳು ಮೆಣಸು ಸ್ವಲ್ಪ ಇಷ್ಟನ್ನು ನೀರು ಸೇರಿಸಿದೆ ರುಬ್ಬಿಕೊಳ್ಳಿ. ತೆಂಗಿನ ತುರಿ, ಲವಂಗ, ಶುಂಠಿ ಚಕ್ಕೆ, ಟೊಮೆಟೊ ಸ್ವಲ್ಪ ಉರುಗಡ್ಲೆ ಸೇರಿಸಿ ರುಬ್ಬಿಕೊಳ್ಳಿ. ಒಣಮೆಣಸಿನ ಕಾಯಿ ಪುಡಿ ಮತ್ತು ದನಿಯಾ ಪುಡಿ ನೀರು ಸೇರಿಸಿ ಕಲಸಿ ಇಟ್ಟು ಕೊಳ್ಳಿ.
ಕುಕ್ಕರ್ ಗೆ ಎಣ್ಣೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ರುಬ್ಬಿದ ಮಿಶ್ರಣ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ ನಂತರ ಇದಕ್ಕೆ ಮಾಂಸದ ತುಂಡುಗಳನ್ನು ಸೇರಿಸಿ ನೀರು ಇಂಗುವವರೆಗೂ ಹುರಿಯಿರಿ. ಈಗ ದನಿಯಾಪುಡಿ ಮಿಶ್ರಣ ಮತ್ತು ಉಪ್ಪು , ನೀರು ಸೇರಿಸಿ ಕುದಿಯಲು ಬಿಡಿ. ನಂತರ ತೆಂಗಿನತುರಿ ಮಿಶ್ರಣ ಸೇರಿಸಿ. ನೀರು ಬೇಕಿದ್ದರೆ ಸ್ವಲ್ಪ ಸೇರಿಸಿ ಮುಚ್ಚಳ ಮುಚ್ಚಿ ಒಂದು ವಿಸಿಲ್ ಕೂಗಿಸಿ.
Tags
ಮಟನ್ ಸಾರು