ಗೋಬಿ ಮಂಚೂರಿ । Gobi Manchurian
ಬೇಕಾಗುವ ಸಾಮಾಗ್ರಿ :
- ಹೂಕೋಸು -1
- ಕತ್ತರಿಸಿದ ಈರುಳ್ಳಿ – 2
- ದುಂಡು ಮೆಣಸು 2
- ಟೊಮೆಟೊ – 2
- ಕಡಲೆ ಹಿಟ್ಟು-ಸ್ವಲ್ಪ
- ಧಾನ್ಯಗಳ ಹಿಟ್ಟು 1/2 ಕಪ್
- ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಹಸಿಮೆಣಸು 8
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಬೆಳ್ಳುಳ್ಳಿ ಎಸಳು – 6
- ಕರಿಮೆಣಸು – 2 ಚಮಚ
- ಸೋಯಾ ಸಾಸ್ – 2 ಚಮಚ
- ಅಜಿನೊಮೊಟೊ -1 ಚಿಟಿಕೆ
- ಎಣ್ಣೆ – ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
- ಕತ್ತರಿಸಿದ ಹೂಕೋಸನ್ನು ಉಪ್ಪು ಹಾಕಿ ಬೇಯಿಸಬೇಕು. ಬೇಯಿಸುವಾಗ ಪಾತ್ರೆಯ ಬಾಯಿಯನ್ನು ಮುಚ್ಚಿಟ್ಟು ಬೇಯಿಸಬೇಕು.
- ನೀರನ್ನು ಬಸಿದು ಹೂಕೋಸನ್ನು ಅಗಲವಾದ ಪಾತ್ರೆಯಲ್ಲಿ ಆರಲು ಇಡಬೇಕು ಇದರಿಂದ ಹೂಕೋಸಿನಲ್ಲಿ ನೀರು ಆವಿಯಾಗುತ್ತದೆ.
- ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಕಟಲೆಹಿಟ್ಟು, ಜೋಳದ ಹಿಟ್ಟು, ಕತ್ತರಿಸಿದ ಮೆಣಸಿಕಾಯಿ ಅರ್ಧ, ಕರಿಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್, ನೀರು ಹಾಕಿ ಗಟ್ಟಿಯಾಗಿ ಕಲಿಸಬೇಕು.
- ನಂತರ ಅರ್ಧ ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕುದಿಯುವಾಗ ಅದರಲ್ಲಿ ಹೂಕೋಸನ್ನು ಹಿಟ್ಟಿನೊಂದಿಗೆ ಬೆರೆಸಿ ಹಾಕಬೇಕು. ನಂತರ ಉರಿಯನ್ನು ಕಡಿಮೆಮಾಡಿ ಅದನ್ನು ಎಣ್ಣೆಯಲ್ಲಿ ಮತ್ತಷ್ಟು ಹುರಿಯುವಂತೆ ಮಾಡಬೇಕು,
- ಹುರಿದ ಹೂಕೋಸನ್ನು ತೆಗೆದು ಪೇಪರಿನಲ್ಲಿ ಇಡಬೇಕು.
- ನಂತರ ಮತ್ತೊಂದು ಬಾಣಲೆಯನ್ನು ತೆಗೆದು ಅದಕ್ಕೆ ಎಣ್ಣೆ ಹಾಕಿ ಬಿಸಿಯಾದಾಗ ಕತ್ತರಿಸಿದ ಈರುಳ್ಳಿಯನ್ನು ಹಾಕಬೇಕು. ಅದು ಕಂದು ಬಣ್ಣಕ್ಕೆ ತಿರುವಾಗ ಕರಿಮೆಣಸು ಮತ್ತು ಬೆಳ್ಳುಳ್ಳಿ ಹಾಕಿ ಬಿಸಿಮಾಡಬೇಕು.
- ಅದಕ್ಕೆ ಟೊಮೆಟೊ ಹಾಕಿ, ಕತ್ತರಿಸಿದ ಉಳಿದ ಮೆಣಸು ಮತ್ತು ದುಂಡು ಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು
- 3-4 ನಿಮಿಷ ಬೇಯಿಸಿದ ನಂತರ ಅಜಿನೊಮಿಟೊ ಮತ್ತು ಸೋಯಾ ಸಾಸ್ ಹಾಕಿ ಮಿಶ್ರಣ ಮಾಡಿ, ಅದಕ್ಕೆ 3/4 ನೀರು ಹಾಕಿ ಕುದಿಸಬೇಕು.
- ಗ್ರೇವಿ ಬಿಸಿಯಾಗಿ ಗುಳ್ಳೆಗಳು ಬರಲಾರಭಿಸಿದಾಗ ಹುರಿದ ಮಂಚೂರಿ ಹಾಕಿ 5 ನಿಮಿಷ ಕಾಯಿಸಬೇಕು
- ಗೋಬಿ ಮಂಚೂರಿ ಸವಿಯಲು ಸಿದ್ಧ.
Tags
ಗೋಬಿ ಮಂಚೂರಿ