Mashoorm Masala | ಮಶ್ರೂಮ್ ಮಸಾಲ
ಬೇಕಾಗುವ ಪದಾರ್ಥಗಳ :
- ಅಣಬೆ 200 ಗ್ರಾಂ
- ಗಸಗಸೆ 1 ಚಮಚ
- ಗೋಡಂಬಿ 6
- ಹಸಿಮೆಣಸಿನ ಕಾಯಿ 3
- ಕಾಯಿ ತುರಿ- ಅರ್ಧ ಬಟ್ಟಲು
- ಎಣ್ಣೆ- 3 ಚಮಚ
- ಅರಿಶಿಣದ ಪುಡಿ- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಜೀರಿಗೆ ಪುಡಿ - ಕಾಲು ಚಮಚ
- ಚಕ್ಕ, ಲವಂಗ-ಸ್ವಲ್ಪ
- ಪಲಾವ್ ಎಲೆ- 2
- ದನಿಯಾ ಪುಡಿ- ಅರ್ಧ ಚಮಚ
- ಖಾರದ ಪುಡಿ - 1 ಚಮಚ
- ಜೀರಿಗೆ - 1 ಚಮಚ
- ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ
- ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಒಂದು ಬಟ್ಟಲು
- ತುಪ್ಪ- 2 ಚಮಚ
- ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
- ಗರಂ ಮಸಾಲಾ ಪುಡಿ - ಅರ್ಧ ಚಮಚ
ಮಾಡುವ ವಿಧಾನ :
ಮೊದಲಿಗೆ ಮಿಕ್ಸಿ ಜಾರ್'ಗೆ ಗಸಗಸೆ, ಗೋಡಂಬಿ, ಹಸಿಮೆಣಸಿನ ಕಾಯಿ ಹಾಗೂ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಜೀರಿಗೆ ಚಕ್ಕೆ, ಲವಂಗ, ಪಲಾವ್ ಎಲೆ ಹಾಗೂ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಟೊಮೆಟೋ ಹಾಕಿ ಕೆಂಪಗೆ ಹುರಿದುಕೊಳ್ಳಿ .
ಬಳಿಕ ಬೆಳ್ಳುಳ್ಳಿ ಪೇಸ್ಟ್, ಶುಂಠಿ, ಅರಿಶಿಣದ ಪುಡಿ, ಉಪ್ಪು, ದನಿಯಾ ಪುಡಿ, ಖಾರದ ಪುಡಿ, ಜೀರಿಗೆ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 2-3 ನಿಮಿಷ ಕುದಿಯಲು ಬಿಡಿ.
ನಂತರ ಚೆನ್ನಾಗಿ ತೊಳೆದು ಕತ್ತರಿಸಿಕೊಂಡ ಅಣಬೆ ಹಾಗೂ ರುಬ್ಬಿಕೊಂಡ ಮಿಶ್ರಣ ಹಾಕಿ ಅಗತ್ಯವಿದ್ದಷ್ಟು ನೀರು ಹಾಕಿ 10-15 ನಿಮಿಷ ನೀರು ಹಾಕಿ ಕುದಿಯಲು ಬಿಡಿ.
ಪ್ಯಾನ್ ಗೆ ಸ್ವಲ್ಪ ತುಪ್ಪ ಹಾಕಿ ಕಾದ ನಂತರ ಗರಂ ಮಸಾಲಾಪುಡಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ ಇದನ್ನು ಕುದಿಯುತ್ತಿರುವ ಮಸಾಲೆಗೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಶ್ರೂಮ್ ಮಾಸಾಲೆ ಸವಿಯಲು ಸಿದ್ಧ.
Tags
ಮಶ್ರೂಮ್ ಮಸಾಲ