ಕೋರಿ ರೊಟ್ಟಿ |Kori Rotti
ಬೇಕಾಗುವ ಸಾಮಾಗ್ರಿಗಳು:
* ಚಿಕನ್ 1 ಕೆಜಿ
* ಈರುಳ್ಳಿ 2
* ತೆಂಗಿನ ಹಾಲಿನ ರಸ ಅರ್ಧ ಕಪ್
* ಒಂದು ಇಂಚಿನಷ್ಟು ಶುಂಠಿ
* ಬೆಳ್ಳುಳ್ಳಿ 5 ಎಸಳು
* 1 ಚಮಚ ಜೀರಿಗೆ
* ಕೊತ್ತಂಬರಿ ಬೀಜ 1 ಚಮಚ
* ಒಣ ಮೆಣಸಿನ ಕಾಯಿ 5
* 2 ಚಮಚದಷ್ಟು ತೆಂಗಿನ ತುರಿ
* ಅರಿಶಿಣ ಪುಡಿ -ಅರ್ಧ ಚಮಚ
* ಕರಿಬೇವಿನ ಎಲೆ
* ಸ್ವಲ್ಪ ಚಕ್ಕೆ ಹಾಗೂ ಲವಂಗ
* ರುಚಿಗೆ ತಕ್ಕ ಉಪ್ಪು
* 4-5 ಚಮಚ ಎಣ್ಣೆ
ತಯಾರಿಸುವ ವಿಧಾನ:
- ಪಾತ್ರೆಯಲ್ಲಿ 1 ಚಮಚ ಎಣ್ಣೆ ಹಾಕಿ ಅದನ್ನು ಉರಿಯಲ್ಲಿಡಬೇಕು. ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಅದನ್ನು ಬದಿಯಲ್ಲಿಡಬೇಕು.
- ನಂತರ ಬಾಣಲೆ ಬಿಸಿ ಮಾಡಿ ಅದಕ್ಕೆ ಒಣಮೆಣಸು, ತೆಂಗಿನಕಾಯಿ ತುರಿ, ಕೊತ್ತಂಬರಿ ಬೀಜ ಹಾಕಿ ಕೊತ್ತಂಬರಿ ಬೀಜದ ಬಣ್ಣ ಸ್ವಲ್ಪ ಬದಲಾಗುವವರೆಗೆ ಹುರಿಯಬೇಕು. ನಂತರ ಉರಿಯಿಂದ ತೆಗೆದು ಅದಕ್ಕೆ ಅರಿಶಿಣ ಪುಡಿ, ಜೀರಿಗೆ, ಚಕ್ಕೆ, ಲವಂಗ, ಬೆಳ್ಳುಳ್ಳಿ ಹಾಕಿ ಪುನಃ ಒಂದು ನಿಮಿಷ ಹುರಿದು ಉರಿಯಿಂದ ತೆಗೆಯಬೇಕು. ನಂತರ ಅದಕ್ಕೆ ಫ್ರೈ ಮಾಡಿದ ಈರುಳ್ಳಿ ಹಾಕಿ ಪೇಸ್ಟ್ ಮಾಡಬೇಕು.
- ಈಗ ಸಾರು ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಅದರಲ್ಲಿ ರುಬ್ಬಿದ ಸಂಬಾರ ಪದಾರ್ಥಗಳ ಪೇಸ್ಟ್ ಹಾಕಬೇಕು. ನಂತರ 1-2 ನಿಮಿಷ ಸೌಟ್ ನಿಂದ ಆಡಿಸಿ ನಂತರ ತೆಂಗಿನ ಹಾಲು ಹಾಕಬೇಕು. ತೆಂಗಿನ ಹಾಲು ಕುದಿ ಬರುವಾಗ ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿದರೆ ರುಚಿಕವಾದ ಕೋರಿ ಕರಿ ರೆಡಿ.
Recipe credit : Sahana
Tags
ಕೋರಿ ರೊಟ್ಟಿ