ಮ್ಯಾಕ್ರೋನಿ ಪಾಸ್ತಾ | Macaroni Pasta

  ಮ್ಯಾಕ್ರೋನಿ ಪಾಸ್ತಾ | Macaroni Pasta

Macaroni Pasta
Macaroni Pasta


ಬೇಕಾಗುವ ಪದಾರ್ಥಗಳು:

ಪಾಸ್ತ- ಒಂದು ಸಣ್ಣ ಬಟ್ಟಲು

ಈರುಳ್ಳಿ- 1-2

ಬ್ಯಾಡಗಿ ಮೆಣಸಿನ ಕಾಯಿ, ಖಾರದ ಮೆಣಸಿನ ಕಾಯಿ- 4

ಟೊಮೆಟೋ-2

ಕೊತ್ತಂಬರಿ ಸೊಪ್ಪು- ಸ್ವಲ್ಪ

ಕಾಳು ಮೆಣಸಿನ ಪುಡಿ- ಅರ್ಧ ಚಮಚ

ಅರಿಶಿನದ ಪುಡಿ- ಕಾಲು ಚಮಚ

ಖಾರದ ಪುಡಿ- ಅರ್ಧ ಚಮಚ

ಕಡಲೆಬೇಳೆ- 1 ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಅಗತ್ಯಕ್ಕೆ ಅನುಗುಣವಾಗಿ


ಮಾಡುವ ವಿಧಾನ :

ಮೊದಲು ಪಾತ್ರೆಯೊಂದಕ್ಕೆ ಪಾಸ್ತ, ಸ್ವಲ್ಪ ಉಪ್ಪು, 1 ಚಮಚ ಎಣ್ಣೆ, ಸ್ವಲ್ಪ ನೀರು ಹಾಕಿ 10 ನಿಮಿಷ ಬೇಯಿಸಿಕೊಳ್ಳಬೇಕು. ನಂತರ ಬೆಂದ ಪಾಸ್ತದಲ್ಲಿನ ನೀರನ್ನು ಬಸಿದು, ತಣ್ಣಗಿನ ನೀರು ಹಾಕಿ 2 ನಿಮಿಷ ಬಿಟ್ಟು ಆ ನೀರನ್ನು ಬಸಿದಿಟ್ಟುಕೊಳ್ಳಬೇಕು.

ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ 1 ಚಮಚ ಎಣ್ಣೆಯನ್ನು ಹಾಕಿ ಒಣಗಿದ ಮೆಣಸಿನ ಕಾಯಿ ಉರಿಯಬೇಕು. ನಂತರ ಇದಕ್ಕೆ ಕಡಲೆಬೇಳೆಯನ್ನು ಹಾಕಿ ಕೆಂಪಗೆ ಮಾಡಿಟ್ಟುಕೊಳ್ಳಬೇಕು.

ಮತ್ತೆ 1 ಚಮಚ ಎಣ್ಣೆ ಹಾಕಿ ಸ್ವಲ್ಪ ಈರುಳ್ಳಿ ಹಾಗೂ ಟೊಮೆಟೋವನ್ನು ಪೇಸ್ಟ್ ಆಗುವವರೆಗೂ ಹುರಿಯಬೇಕು. ನಂತರ ತಣ್ಣಗಾದ ಬಳಿಕ ಎಲ್ಲವನ್ನು ಮಿಕ್ಸಿ ಜಾರ್'ಗೆ ಹಾಕಿ, ಸ್ವಲ್ಪ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. 

ಮತ್ತೆ ಒಲೆಯ ಮೇಲೆ ಬಾಣಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಕತ್ತರಿಸಿಕೊಂಡ ಸ್ವಲ್ಪ ಈರುಳ್ಳಿ ಹಾಕಿ ಕೆಂಪಗೆ ಹುರಿಯಬೇಕು. ನಂತರ ಇದಕ್ಕೆ ರುಬ್ಬಿಕೊಂಡ ಮಿಶ್ರಣ,, ರುಚಿಗೆ ತಕ್ಕಷ್ಟು ಉಪ್ಪು,  ಕಾಳುಮೆಣಸಿನ ಪುಡಿ ಖಾರದ ಪುಡಿ, ಅರಿಶಿನದ ಪುಡಿ ಹಾಕಿ ಕುದಿಯಲು ಬಿಡಬೇಕು. ಮಸಾಲೆಯಿಂದ ಎಣ್ಣೆ ತೇಲುತ್ತಿರುವುದು ಕಂಡ ಬಂದ ಕೂಡಲೇ ಈಗಾಗಲೇ ಬೇಯಿಸಿಟ್ಟುಕೊಂಡ ಪಾಸ್ತವನ್ನು ಅದಕ್ಕೆ ಹಾಕಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ದೇಸಿ ಸ್ಟೈಲ್ ಮ್ಯಾಕ್ರೋನಿ ಪಾಸ್ತಾ ಸವಿಯಲು ಸಿದ್ಧ.

Post a Comment

Previous Post Next Post