ಚಿಕನ್ ಮಂಚೂರಿ | Chicken Manchurian

  ಚಿಕನ್ ಮಂಚೂರಿ | Chicken Manchurian

Chicken Manchurian

ಬೇಕಾಗುವ ಪದಾರ್ಥಗಳು

  • ಬೋನ್ ಲೆಸ್ ಚಿಕನ್ - 400 ಗ್ರಾಂ
  • ಮೊಟ್ಟೆ - 1
  • ಜೋಳದ ಹಿಟ್ಟು - 6 ಚಮಚ
  • ಉಪ್ಪು- ರುಚಿಗೆ 
  • ಸೋಯಾ ಸಾಸ್ - 2 ಚಮಚ
  • ಎಣ್ಣೆ 
  • ಶುಂಠಿ, ಬೆಳ್ಳುಳ್ಳಿ - ಸಣ್ಣಗೆ ಹೆಚ್ಚಿದ್ದು 
  • ಈರುಳ್ಳಿ - 2
  • ಮೆಣಸಿನ ಕಾಯಿ - 4
  • ಚಿಕನ್ ಸ್ಟಾಕ್ - 2 ಬಟ್ಟಲು
  • ದೊಡ್ಡ ಮೆಣಸಿನಕಾಯಿ - 1
  • ವಿನೇಗರ್ - 2 ಚಮಚ
  • ಈರುಳ್ಳಿ ಸೊಪ್ಪು - 1 ಬಟ್ಟಲು

ಮಾಡುವ ವಿಧಾನ :

  • ಮೊಟ್ಟೆ ಹಾಗೂ 1 ಚಮಚ ಜೋಳದ ಹಿಟ್ಟು, ಉಪ್ಪು, 1 ಚಮಚ ಸೋಯಾ ಸಾಸನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದಕ್ಕೆ ಕತ್ತರಿಸಿ ತೊಳೆದ  ಚಿಕನ್ ಪೀಸ್ ಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅರ್ಧಗಂಟೆಗಳ ಕಾಲ ನೆನೆಯಲು ಬಿಡಬೇಕು.
  • ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು  ಕಾಯಲು ಬಿಡಬೇಕು. ಇದಕ್ಕೆ ಮಸಾಲೆಯಲ್ಲಿ ನೆನೆದ ಚಿಕನ್ ಪೀಸ್ ಗಳನ್ನು ಹಾಕಿ ಚೆನ್ನಾಗಿ ಕರಿಯಬೇಕು. ಚಿಕನ್ ಪೀಸ್ ಗಳು ಬಿಸಿಯಿರುವಾಗಲೇ ಇದಕ್ಕೆ ಕತ್ತರಿಸಿಕೊಂಡ ಶುಂಠಿ, ಬೆಳ್ಳುಳ್ಳಿಯನ್ನು ಹಾಕಬೇಕು.
  • ಒಲೆಯ ಮೇಲೆ ಮತ್ತೊಂದು ಪಾತ್ರೆಯನ್ನು ಇಟ್ಟು, ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಈರುಳ್ಳಿ ಹಾಕಿ ಹುರಿದುಕೊಳ್ಳಬೇಕು. ನಂತರ ದೊಡ್ಡ ಮೆಣಸಿನ ಕಾಯಿ ಹಾಕಿ ಹುರಿಯಬೇಕಿ. ಇದಕ್ಕೆ ಸೋಯಾ ಸಾಸ್, ಚಿಕನ್ ಸ್ಟಾಕ್ ಹಾಕಬೇಕು. ಜೋಳದ ಹಿಟ್ಟನ್ನು ಬಟ್ಟಲಿಗೆ ಹಾಕಿ ನೀರಲ್ಲಿ ಕಲಸಿಕೊಂಡು ಇದನ್ನು ಹಾಕಿ ಸಾಸ್ ಗಟ್ಟಿಯಾಗುವವರೆಗೂ ಬಿಡಬೇಕು. ಎಣ್ಣೆಯಲ್ಲಿ ಕರಿದುಕೊಂಡ ಚಿಕನ್ ನ್ನು ಈ ಮಸಾಲೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ವಿನೇಗರ್ ಹಾಗೂ ಈರುಳ್ಳಿ ಹೂವು ಹಾಕಿ ಅಲಂಕರಿಸಿದರೆ ರುಚಿಕರವಾದ ಚಿಕನ್ ಮಂಚೂರಿ ಸವಿಯಲು ಸಿದ್ಧ.

Post a Comment

Previous Post Next Post