Paneer Momos | ಪನ್ನೀರ್ ಮೊಮೊಸ್

 

ಪನ್ನೀರ್ ಮೊಮೊಸ್ 

Paneer Momos


ತಯಾರಿಸಲು ಬೇಕಾಗುವ ಸಾಮಗ್ರಿಗಳು :

  • 1 ಕಪ್ ಬೀನ್ಸ್  
  • 1 ಕಪ್ ಸ್ಪ್ರಿಂಗ್ ಆನಿಯನ್  
  • 1/2 ಕಪ್  ಈರುಳ್ಳಿ
  •  ಕ್ಯಾರೆಟ್  1/2 ಕಪ್ 
  • 1/2 ಚಮಚ ಬೆಳ್ಳುಳ್ಳಿ  
  • 4 ಕಪ್ ಮೈದಾ  
  • 1/2 ಕಪ್ ಕ್ಯಾಬೇಜ್  
  • 1/4 ಚಮಚ ಕಾಳು ಮೆಣಸಿನ ಪುಡಿ  
  • 1 ಕಪ್ ಪನ್ನೀರ್  
  •  1 ಚಮಚ ಬೆಣ್ಣೆ  
  •  ಉಪ್ಪು 
  • ಎಣ್ಣೆ

ಮಾಡುವ ವಿಧಾನ: 

  • ಪ್ಯಾನ್‌ಗೆ ಎಣ್ಣೆ ಹಾಕಿ ಅದಕ್ಕೆ  ಕತ್ತರಿಸಿದ ಈರುಳ್ಳಿ, ಬೆಳ್ಳಿಳ್ಳಿ ಹಾಕಿ 2 ನಿಮಿಷ  ಆಡಿಸಿ, ಉಳಿದೆಲ್ಲಾ ಸಾಮಗ್ರಿ ಹಾಕಿ, ರುಚಿಗೆ  ಉಪ್ಪು ಸೇರಿಸಿ ಫ್ರೈ ಮಾಡಿ ಇಡಿ. 
  •  ಈಗ ಮೈದಾಕ್ಕೆ ರುಚಿಗೆ ತಕ್ಕ ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಮಿಕ್ಸ್ಮಾಡಿ. ಹಿಟ್ಟು ಮೃದುವಾದ ಬಳಿಕ ಅದನ್ನು  ಚಿಕ್ಕಚಿಕ್ಕ ಉಂಡೆ ಕಟ್ಟಿ. 
  •  ಈಗ ಚಪಾತಿಗೆ ಲಟ್ಟಿಸುವ ರೀತಿ ತೆಳುವಾಗಿ ಲಟ್ಟಿಸಿ. ಲಟ್ಟಿಸಿದಾಗ ವೃತ್ತಾಕಾರವಾಗಿ ಬಾರದಿದ್ದರೆ ಒಂದು ಕಪ್‌ ಒತ್ತಿ ಹಿಡಿದು ಅದನ್ನು ರೌಂಡ್‌ ಶೇಪ್‌ಗೆ ತನ್ನಿ. 
  •  ಈಗ ನೀವು ಸ್ವಲ್ಪ ಫ್ರೈ ತೆಗೆದು ಲಟ್ಟಿಸಿದ ಹಿಟ್ಟಿನಲ್ಲಿ ಹಾಕಿ ಅದನ್ನು ಸ್ಟೈಲ್ ಆಗಿ ಮಡಚಿ. (ಮಡಚುವಾಗ ಅದರ ತುದಿಯನ್ನು  ನಿಧಾನಕ್ಕೆ ಮಡಚಿ ಮೊಮೊಸ್ ಆಕಾರಕ್ಕೆ ತರಬಹುದು, ಇಲ್ಲ ಎಲ್ಲಾ ಜೊತೆ ಸೇರಿಸಿ ತುದಿಯಲ್ಲಿ ಮೆಲ್ಲನೆ ತಿರುಗಿಸಿದರು ಆಕರ್ಷಕ ಆಕಾರ ಸಿಗುವುದು). 
  •  ನಂತರ ಮೊಮೊಸ್ ಅನ್ನು ಹಬೆಯಲ್ಲಿ 15 ನಿಮಿಷ ಬೇಯಿಸಿರಿ . 
  •  ಈಗ ರೆಡಿಯಾದ ಮೊಮೊಸ್ ಅನ್ನು ಕೆಂಪು ಚಟ್ನಿ ಜೊತೆ ಸವಿಯಿರಿ.


Post a Comment

Previous Post Next Post