ಪ್ರಾನ್ ಮಲೈ ಕರಿ | Prawns Curry
ಮಾಡಲು ಬೇಕಾಗುವ ಸಾಮಗ್ರಿ :
- ಸೀಗಡಿ - 500 ಗ್ರಾಂ
- ಚಕ್ಕೆ - 2
- ಹಸಿರು ಏಲಕ್ಕಿ - 4
- ಚಮಚ ಶುಂಠಿ ಪೇಸ್ಟ್ - 1
- ಚಮಚ ಖಾರದ ಪುಡಿ - 1/2
- ತೆಂಗಿನಕಾಯಿ ಹಾಲು ಒಂದೂವರೆ ಕಪ್
- ರುಚಿಗೆ ತಕ್ಕ ಉಪ್ಪು
- ಚಮಚ ಎಣ್ಣೆ - 3
- ಎಸಳು ಬೆಳ್ಳುಳ್ಳಿ - 6
- ಪಲಾವ್ ಎಲೆ - 4
- ಹಸಿ ಮೆಣಸಿನಕಾಯಿ - 6 (ಖಾರಕ್ಕೆ ತಕ್ಕಂತೆ)
- ಚಮಚ ಸಕ್ಕರೆ 1
- ಸೋಯಾಬೀನ್ ಎಣ್ಣೆ 3 ಚಮಚ
ಮಸಾಲೆಗೆ ಬೇಕಾಗುವ ಸಾಮಗ್ರಿ :
- ಈರುಳ್ಳಿ ಪೇಸ್ಟ್ - 5 ಚಮಚ
- ಅರಿಶಿಣ - 1 ಚಮಚ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ತಯಾರಿಸುವ ವಿಧಾನ :
- ಸೀಗಡಿಯನ್ನು ಸ್ವಚ್ಛ ಮಾಡಿ ಅದಕ್ಕೆ ಅರಿಶಿಣ, ಈರುಳ್ಳಿ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಅರ್ಧ ಗಂಟೆ ಇಡಿ.
- ನಂತರ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ಸೀಗಡಿ ಹಾಕಿ ಫ್ರೈ ಮಾಡಿ, ಸ್ವಲ್ಪ ಕಂದು ಬಣ್ಣಕ್ಕೆ ಬಂದಾಗ ತೆಗೆದು ಇಡಿ. ಅದೇ ಎಣ್ಣೆಯಲ್ಲಿ ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ ತೆಗೆಯಿರಿ.
- ಈಗ ಅದೇ ಎಣ್ಣೆಗೆ ಲವಂಗ, ಏಲಕ್ಕಿ, ಚಕ್ಕೆ ಹಾಕಿ ಈಗ ಈರುಳ್ಳಿ ಪೇಸ್ಟ್ ಹಾಕಿ, ಸಕ್ಕರೆ ಹಾಕಿ ಈರುಳ್ಳಿ ಪೇಸ್ಟ್ ಸ್ವಲ್ಪ ಕಂಡು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
- ಈಗ ಶುಂಠಿ ಪೇಸ್ಟ್ ಹಾಕಿ ಫ್ರೈ ಮಾಡಿ ಅನಂತರ ತೆಂಗಿನಕಾಯಿ ಹಾಲು ಹಾಕಿ ಸ್ವಲ್ಪ ನೀರಿ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಅರಿಶಿಣ ಪುಡಿ , ಖಾರದ ಪುಡಿ, ಹಸಿ ಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ ಕುದಿಸಿ.
- ಗ್ರೇವಿ ಮೇಲ್ಭಾಗದಲ್ಲಿ ಎಣ್ಣೆ ತೇಲಲಾರಂಭಿಸಿದಾಗ ಅದಕ್ಕೆ ಫ್ರೈ ಮಾಡಿದ ಬೆಳ್ಳುಳ್ಳಿ , ಫ್ರೈ ಮಾಡಿದ ಸೀಗಡಿ ಹಾಕಿ ಕಡಿಮೆ ಉರಿಯಲ್ಲಿ 3-4 ನಿಮಿಷ ಬೇಯಿಸಿದರೆ ರುಚಿ-ರುಚಿಯಾದ ಸೀಗಡಿ ಕರಿ ರೆಡಿ.
Tags
ಪ್ರಾನ್ ಮಲೈ ಕರಿ