ಪತ್ರೋಡೆ ರೆಸಿಪಿ ಮಲ್ನಾಡ್ ಸ್ಪೆಷಲ್
ಬೇಕಾಗುವ ಸಾಮಗ್ರಿ ಗಳು :
- 5-6 ಕೆಸುವಿನ ಎಲೆ
- 2 ಲೋಟ ಅಕ್ಕಿ
- 1 ತೆಂಗಿನಕಾಯಿ
- ಖಾರದ ಪುಡಿ
- 2 ಚಮಚ ಕೊತ್ತಂಬರಿ ಪುಡಿ
- 1/2 ಚಮಚ ಅರಿಶಿಣ ಪುಡಿ
- 1/4 ಚಮಚ ಜೀರಿಗೆ
- ಹುಣಸೆ ಹಣ್ಣು
- 2 ಟೊಮೆಟೊ
- 2 ಈರುಳ್ಳಿ
- 2-3 ಹಸಿ ಮೆಣಸಿನಕಾಯಿ
- ರುಚಿಗೆ ತಕ್ಕ ಉಪ್ಪು
- 2-3 ಬಾಳೆಲೆ
ಮಾಡುವ ವಿಧಾನ :
* ಕೆಸುವಿನ ಸೊಪ್ಪಿನ ನಾರು ಬಿಡಿಸಿ ಕತ್ತರಿಸಿಕೊಳ್ಳಿ
* ಅಕ್ಕಿಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಸ್ವಲ್ಪ ಉಪ್ಪು ಹಾಕಿ ರುಬ್ಬಿಕೊಳ್ಳಬೇಕು ( ಸ್ವಲ್ಪ ಗಟ್ಟಿಯಾಗಿ ದೋಸೆ ರುಬ್ಬುವ ಹಾಗೆ ರುಬ್ಬಬೇಕು).
* ಈಗ ಕೆಸುವಿನ ಎಲೆ ಜೊತೆ ಮಿಶ್ರಮಾಡಿ.
* ಬಾಳೆಲೆಯನ್ನು ಒಲೆ ಬೆಂಕಿಯಲ್ಲಿ ಅಥವಾ ಗ್ಯಾಸ್‌ನಲ್ಲಿ ಬಾಡಿಸಿ.
* ಅದಕ್ಕೆ ಅಕ್ಕಿಹಿಟ್ಟು ಹಾಕಿ ಮಡಚಿ ಹವೆ ಯಲ್ಲಿ ಬೇಯಿಸಿ.
* ಇದೇ ಸಮಯಕ್ಕೆ ತೆಂಗಿನ ಕಾಯಿ ತುರಿದು ಅದಕ್ಕೆ ಮಸಾಲೆ ಸಾಮಗ್ರಿ ಹಾಗೂ ಹುಣಸೆಹಣ್ಣು ಹಾಕಿ ರುಬ್ಬಿಕೊಳ್ಳಬೇಕು.
* ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ ಕತ್ತರಿಸಿ ಹಾಕಿ ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಕುದಿಸಿ.
* ಈಗ ಬೆಂದ ಹಿಟ್ಟನ್ನು ಎಲೆಯಿಂದ ಬಿಡಿಸಿ ಚಿಕ್ಕದಾಗಿ ಕತ್ತರಿಸಿ, ಕುದಿಸಿದ ಮಿಶ್ರಣದಲ್ಲಿ ಹಾಕಿ ಮಿಶ್ರ ಮಾಡಿ 2 ಗಂಟೆ ಇಡಿ. ಹಿಟ್ಟು ಚೆನ್ನಾಗಿ ಮಸಾಲೆ ಹೀರಿಕೊಳ್ಳುತ್ತದೆ.
* ನಂತರ ಅದನ್ನು ಮತ್ತೊಮ್ಮೆ ಪುಡಿ-ಪುಡಿ ಮಾಡಿ ಮಿಶ್ರ ಮಾಡಿದರೆ ಸವಿಯಲು ರುಚಿಯಾದ ಪತ್ರೊಡೆ ರೆಡಿ.
ನೆನಪಿರಲಿ :
ಕೆಸುವಿನ ಎಲೆಯಿಂದ ತುರಿಕೆ ಉಂಟಾಗದಿರಲು ಎಲೆ ಕಿತ್ತು ನಾರು ತೆಗೆದು ಒಂದು ದಿನ ಇಡಿ. ಇನ್ನು ಇದನ್ನು ಹುಣಸೆಹಣ್ಣು ಸ್ವಲ್ಪ ಅಧಿಕ ಬಳಸುವುದರಿಂದ ತುರಿಕೆ ಉಂಟಾಗುವುದಿಲ್ಲ, ಪತ್ರೊಡೆ ರುಚಿಯೂ ಹೆಚ್ಚುವುದು