Biriyani Recipe in 10 min | ಬಿರಿಯಾನಿ ರೆಸಿಪಿ ಬರಿ ಹತ್ತು ನಿಮಿಷಗಳಲ್ಲಿ

                            ಬಿರಿಯಾನಿ ರೆಸಿಪಿ ಬರಿ ಹತ್ತು ನಿಮಿಷಗಳಲ್ಲಿ



ಮಾಡಲು ಬೇಕಾಗುವ  ಸಾಮಗ್ರಿಗಳು :

  • 3 ಕಪ್ ಬಾಸುಮತಿ ಅಕ್ಕಿ 
  • 2 ಲೀಟರ್ ನೀರು 
  • ಒಂದು ಪಿಂಚ್ ಕೇಸರಿ
  • ¼ ಕಪ್ ಹಾಲು
  • ¼ ಕಪ್ ಎಣ್ಣೆ  
  • 2 ಪಲಾವ್ ಎಲೆಗಳು  
  • 2 ತುಂಡು ದಾಲ್ಚಿನ್ನಿ 
  • 7-8 ಲವಂಗ  
  • 10-12 ಏಲಕ್ಕಿ  
  • 4-5 ಕರಿಮೆಣಸು
  • 2 ಜಾಯಿಕಾಯಿ ಪತ್ರೆ  
  • 2 ಟೇಬಲ್ ಸ್ಪೂನ್ ಶಾಹಿ ಜೀರಾ  
  • 1½ ಕಪ್ ಗಳು ಕತ್ತರಿಸಿದ ಈರುಳ್ಳಿ  
  • ½ ಕಿತ್ತಳೆ
  • 2 ಹಸಿರು ಮೆಣಸಿನಕಾಯಿ  
  • 1½ ಟೇಬಲ್ ಸ್ಪೂನ್ ಬೆಳ್ಳುಳ್ಳಿ  
  • 1½ ಟೇಬಲ್ ಸ್ಪೂನ್ ಕತ್ತರಿಸಿದ ಶುಂಠಿ  
  • ಸ್ಪಲ್ಪ ಪುದೀನ ಎಲೆಗಳು  
  • ರುಚಿಗೆ ತಕ್ಕಷ್ಟು ಉಪ್ಪು 
  • 1 ಟೀ ಸ್ಪೂನ್ ರೋಸ್ ವಾಟರ್  
  • 2 ಟೇಬಲ್ ಸ್ಪೂನ್ ತುಪ್ಪ   


ಬಿರಿಯಾನಿ ಮಾಡುವ ವಿಧಾನ :

    ಮೊದಲಿಗೆ ಒಲೆ ಮೇಲೆ ಪಾತ್ರೆಯನ್ನಿಟ್ಟು, ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಬೇ ಎಲೆ,  ಲವಂಗ, ದಾಲ್ಚಿನ್ನಿ, ಕರಿಮೆಣಸು, ಏಲಕ್ಕಿ, ಜಾಯಿಕಾಯಿ ಪತ್ರೆ  ಮತ್ತು ಶಾಹಿ ಜೀರಾವನ್ನು ಸೇರಿಸಿ ಬಾಡಿಸಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ ಯನ್ನು ಸೇರಿಸಿ ರೋಸ್ಟ್ ಮಾಡಿಕೊಳ್ಳಿ. ಈರುಳ್ಳಿ ಕಂದು ಬಣ್ಣವನ್ನು ಪಡೆದ ನಂತರ, ಇದಕ್ಕೆ 2 ಹಸಿರು ಸೀಳಿದ ಮೆಣಸಿನಕಾಯಿ,  ಬೆಳ್ಳುಳ್ಳಿ ಮತ್ತು ಶುಂಠಿಯ ಚೂರುಗಳನ್ನು ಸೇರಿಸಿಕೊಳ್ಳಿ. ಈಗ ಇದಕ್ಕೆ ಅರ್ಧ ಕಿತ್ತಳೆಯ ರಸ ಹಾಗೂ ಕಿತ್ತಳೆಯ ಚೂರನ್ನು ಸೇರಿಸಿಕೊಳ್ಳಿ. ಬಳಿಕ ಪುದೀನ  ಎಲೆಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು 3 ರಿಂದ 4 ನಿಮಿಷ ಬೇಯಿಸಿ. ನಂತರ ಇದಕ್ಕೆ 2 ಲೀಟರ್‌ನಷ್ಟು ನೀರನ್ನು ಸೇರಿಸಿಕೊಳ್ಳಿ. ಇದನ್ನು ಕುದಿಸಿದ ಬಳಿಕ ಮಸಾಲೆಯ ನೀರನ್ನು ಒಂದು ಪಾತ್ರೆಗೆ ಸೋಸಿಕೊಳ್ಳಿ.

    ಗ್ಯಾಸ್ ಮೇಲೆ ಈಗ ಬೇರೆಯದೇ ಪಾತ್ರೆಯನ್ನಿಟ್ಟು ಇದಕ್ಕೆ ಮಸಾಲೆಯ ಈ ನೀರನ್ನು ಹಾಕಿಕೊಳ್ಳಿ. ಇದಕ್ಕೆ ಅಗತ್ಯವಾದಷ್ಟು ಉಪ್ಪನ್ನು ಸೇರಿಸಿ.ನಂತರ ಇದಕ್ಕೆ ರೋಸ್ ವಾಟರ್, ಏಲಕ್ಕಿ ಪುಡಿ, ¼ ಕಪ್ ಹಾಲು ಸೇರಿಸಿಕೊಳ್ಳಿ.ಇದಕ್ಕೆ ಈಗ ಮೊದಲೇ ನೆನೆಸಿಟ್ಟ ಮೂರು ಕಪ್ ಬಾಸುಮತಿ ಅಕ್ಕಿಯನ್ನು ಸೇರಿಸಿ. ಮೊದಲಿಗೆ ಗ್ಯಾಸ್ ಹೈ ಫ್ಲೇಮ್ ನಲ್ಲಿಟ್ಟು ಕುದಿಸಿಕೊಳ್ಳಿ. ಈಗ ಇದಕ್ಕೆ ಕೇಸರಿ, ತುಪ್ಪ ಸೇರಿಸಿ. ಪಾತ್ರೆಯನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ನೀರು ಸಂಪೂರ್ಣ ಆರಿದೆ ಎಂದರೆ ನಿಮ್ಮ ಬಿರಿಯಾನಿ ರೈಸ್ ಸಿದ್ಧವಾಗಿದೆ.

Post a Comment

Previous Post Next Post